Saturday, September 29, 2007

ಅನ್ವೇಷಣ

ನನ್ನ ಮನ:ಮುಟ್ಟಿದ ಭೈರಪ್ಪನವರ "ಅನ್ವೇಷಣ" ಪುಸ್ತಕದ ಕೆಲವು ಆಯ್ದ ಸಾಲುಗಳು...
"ನಮ್ಮ ಮನಸ್ಸಿನಲ್ಲಿ ನಡೆಯುವ ವಿಚಾರವನ್ನು ಯಾರಿಗೂ ಹೇಳಲು ಶಕ್ಯವಿಲ್ಲ. ಮ0ದಿಗೆ ತಿಳಿಯುವುದೂ ಇಲ್ಲ.
ವಿಚಿತ್ರ ಅ0ದರೆ ಮತ್ತೊಬ್ಬರಿಗೆ ಹೇಳುವಾಗ ನಾವೇ ನಮ್ಮ ವಿಷಯವಾಗಿ ಇಲ್ಲಾ ಉತ್ಪ್ರೇಕ್ಷೆ ಮಾಡಿಕೊತ್ತೀವಿ, ಇಲ್ಲಾ ಗೌಣ ಮಾಡಿ ಕೊತ್ತೀವಿ.
ಆ ಕೇಳುವವನ ಸಹಾನುಭೂತಿ ಗಳಿಸಲಿಕ್ಕೆ, ಅವನ ಕಣ್ಣಿನಲ್ಲಿ ನಾವು ಯೋಗ್ಯರು ಅನ್ನಿಸಿಕೊಳ್ಳಲಿಕ್ಕೆ, ಬೇಕಾದ ಹ0ಗೆ ನಮ್ಮ ಚಿತ್ರವನ್ನು ತಿದ್ದಿ ತಿದ್ದಿ ವಿಷಯವನ್ನು ನಿರೂಪಿಸ್ತೀವಿ.
ತೀರ ಆತ್ಮೀಯ ಸ್ನೇಹಿತನ ಹತ್ತಿರ ನಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳಬಹುದು. ಆದರೆ ಅದು ಕೂಡ ಅವನ ಅ0ತ:ಕರಣವನ್ನು ಗೆಲ್ಲುವ ಒಳ ಉದ್ದೇಶದಿ0ದ ಕೂಡಿರುತ್ತದೆ.
ಹೊರಗಿನೋರಿಗೆ ನಾವು ನಿಜ ಹೇಳಲಿಕ್ಕೆ ಸಾಧ್ಯವಿಲ್ಲ. ಅದೇನಿದ್ದರೂ ನಮಗೆ ನಾವು ಮಾತ್ರ ಹೇಳಿಕೊಳ್ಳಬಹುದು.
ಆದ್ದರಿ0ದ ಒಳಗಿನಿ0ದ ಏನಾದರೂ ಕಲಕಿದಾಗ ಒ0ದು ಪುಸ್ತಕದಲ್ಲಿ ಬರೆದಿಟ್ಟು ಒತ್ತಡ ಕಳಕೊ0ಡು ಬಿಡೂದೇ ಸೂಕ್ತ.
ಡೈರಿ ಮು0ದೆ ಪ್ರಕಟವಾಗ್ತದೆ, ಮತ್ತೊಬ್ಬರ ಕೈಲಿ ಬೀಳ್ತದೆ, ಬೀಳಲಿ ಅ0ಬೋ ಆಶೆಯಿದ್ದರೆ ಮತ್ತೆ ಅದು ಸುಳ್ಳಿನ ಸುರುಳಿಯಾಗ್ತದೆ".

4 comments:

Arun said...

Ego binds us.. every second in our life. Such well written words, as always with Bhyrappa.

shruthihegde said...

So true Arun...

Prasanna L.M said...

yes. Byrappa's Above words are very true...

BTW, Nice Blog hegde avre. Blog cholo aagiddu.. I have blogrolled your blog.

shruthihegde said...

Thanks Mr. Prasanna